ಅಲ್ಲಿಲ್ಲಿ ಕಂಡದ್ದು.. ಮನಸ್ಸಿಗೆ ಬಂದದ್ದು... ನಾನಿಲ್ಲಿ ಗೀಚಿದ್ದು.....

Saturday, 21 August 2010

ಅಮ್ಮನ ಪ್ರೀತಿ ....

ನಿನ್ನೆ friend call ಮಾಡಿದ್ದ.... ಅವನ officeನಲ್ಲಿ ಒಂದು ಡೈವೋರ್ಸ್ ಕೇಸ್ ಅಂತೆ.... ಮದ್ವೆ ಆಗಿ ಒಂದು ತಿಂಗಳೂ ಆಗಿಲ್ಲ.... ಹೆಂಡತಿಗೆ ಅತ್ತೆ ಮಾವ ಬೇಡವಂತೆ....... micro family ಬೇಕಂತೆ... ಪಾಪ ಆಕಡೆ ತಂದೆ ತಾಯೀನೂ ಬಿಡಲಾರದೆ.. ಈಕಡೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೂ ಬಿಡಲಾರದೆ ಒಳ್ಳೆ ಕತ್ತರೀಲಿ ಸಿಕ್ಕಾಕಿಕೊಂಡಿದ್ದ.... ಆವಾಗ ನಂಗೆ ಅನಿಸಿತು.... ಅವಳಿಗೆ ತಾಯಿ ಬೆಲೆ ಗೊತ್ತೇ ಇಲ್ವಾ ಅಂತ..



ಅಮ್ಮಾ.... ನೋವಾದಾಗ ಕಿರುಚುತ್ತೀವಿ.... ಆಶ್ಚರ್ಯವಾದಾಗ್ಲೂ ಅದನ್ನೇ ಹೇಳ್ತೀವಿ... ಆದ್ರೆ ಹೇಳೋ ರೀತಿ ಮಾತ್ರ ಬೇರೆ ಅಷ್ಟೇ.... ನಮ್ಮಲ್ಲಿ ಮಾತ್ರ ಅಲ್ಲ.... ಪ್ರಪಂಚದ ಅಣುರೇಣುವಿನಲ್ಲೂ ಅವಳು ಅಡಗಿದ್ದಾಳೆ... ಆಕೆ ಜಗಜ್ಜನನಿ.... ತನ್ನ ಮಕ್ಕಳ ಜೀವನದ ನಿರೂಪಕಿ.. ಜೀವನದ ಮೊದಲ ಗುರು... ಕರುಣಾಮಯಿ... ಹೆತ್ತು ಹೊತ್ತು ಮಾತು ಕಲಿಸ್ತಾಳೆ... ಬಿದ್ದಾಗ ಎತ್ತಿ ಹಿಡೀತ್ತಾಳೆ.... ಮೊನ್ನೆ ಮನೆಗೆ ಹೋಗಿದ್ದೆ.... ಅಮ್ಮ ಚೆನ್ನಾಗಿ ತಲೆಗೆ ಎಣ್ಣೆ ಹಚ್ಚಿದ್ರು.... ಸ್ನಾನ ಮಾಡಿ ಹಂಗೇ ಮಡಿಲಲ್ಲಿ ಮಲ್ಕೊಂಡೆ... full tension free... 22 ವರ್ಷ ಹಿಂದಕ್ಕೆ ಹೋದಂಗಾಯ್ತು.. ಯಾವ Branded bedನಲ್ಲಿ ಮಲಗಿದ್ರೂ ಆ ಸುಖ ಸಿಗಲಾರದು...... ಒಂದು ಹಳೇ SMS ನೆನಪಾಗ್ತಿದೆ..... " ಪುಟ್ಟ ಮಗು ಹೇಳುತ್ತೆ.... ಆಮ್ಮಾ ನಾನು ಈ ಪ್ರಪಂಚಕ್ಕೇ ಸುತ್ತು ಬರ್ತೀನಿ.... ನೀನು ದೀಪ ಹಿಡ್ಕೊಂಡು ನನ್ ಜೊತೆ ಬರ್ತೀಯಾ????"



ಪ್ರಾಣಿಗಳಲ್ಲೂ ನೀವು ನೋಡಿರ್ತೀರಾ ಮಾತೃವಾತ್ಸಲ್ಯವನ್ನ. ಮಂಗ ತನ್ನ ಮರೀನ ಹಿಡ್ಕೊಂಡು ಮರದಿಂದ ಮರಕ್ಕೆ ಹಾರುತ್ತೆ.... ಟೊಂಗೆ ಪಕ್ಕದಲ್ಲಿದ್ರೆ ಆರಾಮವಾಗಿ ಹಾರುತ್ತೆ... But ದೂರದಲ್ಲಿದ್ರೆ... ತನ್ನ ಮರೀನ ಎದೆಗವುಚಿಕ್ಕೊಳ್ಳುತ್ತೆ... ಅಪಾಯವನ್ನ ತನ್ನ ಮೇಲೆಳೆದುಕ್ಕೊಳ್ಳುತ್ತೆ....! ಚಿರತೆ... ಹುಲಿ... ಸಿಂಹಾನ ನೋಡಿರ್ತೀರಾ... ಎಸ್ಟೊಂದು ಪ್ರಾಣಿಗಳ ಎದೆಯನ್ನ ಸೀಳಿರುತ್ತೆ...! ನಮಗದು ಶೂಲ... ಆದ್ರೆ... ಅದರ ಮರಿಗಳಿಗೋ... ಕುಸುಮ ಕೋಮಲ..... ಕರು ಹಾಲು ಕುಡಿಯೋದನ್ನ ನೋಡಿರ್ತೀರಾ.... ಬಿಟ್ಟ ತಕ್ಷಣ ಎರಡೇ ನೆಗೆತದಲ್ಲಿ ತಾಯಿ ಹತ್ರ ತಲುಪುತ್ತೆ!!!! ಕೆಚ್ಚಲಿಗೆ ತನ್ನ ನೆತ್ತಿಯನ್ನು ಚಚ್ಚುತ್ತೆ.... ಆದ್ರೆ ದನ ಒದೆಯಲ್ವಲ್ಲ?????? ಅದು ಪ್ರೀತಿ!!!!
ಕೆಳಗಡೆ ನೋಡಿ... ಕಡ್ಡಿ ಹುಳ... ಅದ್ರ ಜೊತೆ ಅದರ ಪುಟ್ಟ ಮರೀನೂ ಇದೆ.....




Indian culture ಒಂಥರಾ different... ಕಲ್ಲನ್ನ ಪೂಜಿಸ್ತೀವಿ.... ಮಣ್ಣನ್ನ ಪೂಜಿಸ್ತೀವಿ... ಮರಗಿಡಾನ ಪೂಜಿಸ್ತೀವಿ....! ಒಬ್ಬ ಕವಿ ಬರ್ದಿದ್ದ... ಹೆಸರು ನೆನಪಿಗೆ ಬರ್ತಾ ಇಲ್ಲ.... ಭಾವೋತ್ಕಟನಾದ ಅವನಿಗೆ ಭೂಮಿಯೇ ತಾಯಿಯಾಗಿ ಕಂಡಳು... ಅವನು ಬರೀತ್ತಾನೆ... ಭೂಮೀಲಿ 3/4 ಭಾಗ ನೀರು.... ನಮ್ಮ ಮೈ ಮೇಲೆ ಬಟ್ಟೆ.... ಅವನಿಗೆ ತಾಯಿ ಸೆರಗು ಕಾಣಿಸ್ತು.... ಮುಂದುವರಿಸ್ತಾ ಹೇಳ್ತಾನೆ.... " ಅಮ್ಮಾ ನಾನು ನಿನ್ನ ಮಗು.... ಅಂದಹಾಗೆ ನಂಗೆ ಕುಡಿಲಿಕ್ಕೆ ಎದೆ ಹಾಲು ಬೇಕಲ್ವ???? ಅವನಿಗೆ ಅದೂ ಕಾಣಿಸಿತು... ಹಿಮಾಚಲ.... ವಿಂದ್ಯ... ರೈವತಕ.... ಅಬ್ಬಬ್ಬಾ.... ಅದರಿಂದ ಹರಿದು ಬರುತ್ತಲ್ಲಾ..... ಗಂಗೆ... ಯಮುನೆ.... ಗೋದಾವರಿ.... ತಪತಿ.... ಅಷ್ಟೇ ಅಲ್ಲ.... ದಿನಾಲೂ ನಿನ್ನನ್ನ ತುಳೀತ್ತೀನಲ್ಲ....really sorry ಕ್ಷಮಿಸಿಬಿಡಮ್ಮಾ..... "




But, ಕಾಲಚಕ್ರ ತಿರುಗ್ತಾ ಇದೆ... ಎಲ್ಲರೂ ಒಂದೇ ಥರಾ ಇರಲ್ವಲ್ಲಾ.... ಎಷ್ಟೊಂದು ಬಗೆಯಲ್ಲಿ ಭೂಮಿತಾಯೀನ ಕುರೂಪಗೊಳಿಸ್ತೀವಿ!!! ಆಮೇಲೆ ನಾವೇ ಬಡ್ಕೊಳ್ತೇವೆ.... e-waste ಅಂತೆ... global warming ಅಂತೆ... sea level riseಅಂತೆ.... ದೊಡ್ಡ ದೊಡ್ಡ ಹೆಸರು ಬೇರೆ... ಇನ್ನು ಕೆಲವರು ತಾಯೀನ ಕೊಂದೇ ಬಿಡ್ತಾರೆ... ಎಷ್ಟೊಂದು ವೃಧ್ದಾಶ್ರಮಗಳಿಲ್ಲ.... ಬಿಟ್ ಬಿಡಿ... ನಮಿಗೇನಿಕ್ರೀ ಬೇರೆಯವರ ವಿಷಯ???? ನಾವು ಹಂಗೆ ಮಾಡಲ್ವಲ್ಲಾ... ಇದಕ್ಕೇ ನಾನು ಹೇಳಿದ್ದು... " ನಾವು ಭೂಮೀಲಿ ಅರಳುತ್ತೀವಿ... ಹೊರಳ್ತೀವಿ.... ಬೆಳೀತ್ತೀವಿ... ಬೆಳೆಸ್ತೀವಿ... ಬೆಳಗಿಸ್ತೀವಿ... ಕೊನೆಗೆ ಭೂಮಿಗೇ ಮರಳ್ತೀವಿ.... ಅರಳೋದು ಮರಳೋದು ಸ್ವಾಭಾವಿಕ... ಹೋಗ್ತಾ ನಮ್ಮ ಒಂದು ಪುಟ್ಟ contributionನ್ನ ಈ ಜಗತ್ತಿಗೆ ಕೊಟ್ರೆ... ಶತಮಾನಗಳವರೆಗೆ ನಮ್ಮನ್ನ ಈ ಜಗತ್ತು ನೆನಪಿಡುತ್ತಲ್ಲ್ವಾ????

Saturday, 14 August 2010

ಮಳೆರಾಯನ ಗಮ್ಮತ್ತು......




ಮಳೆ... ಕಾದು ಕಾವೇರಿ.... ಕೆಂಡದಂತಾಗಿದ್ದ ಭುವಿಗೆ ತಂಪೆರೆವ ಪ್ರಕೃತಿಯ cool drink...... ತಿಂಗಳುಗಟ್ಟಳೆ ಬಿಸಿಲ ಬೇಗೆಯಿಂದ ಬೇಸತ್ತು ಹಂಬಲಿಸಿದ ಜೀವಜಾಲಕ್ಕೆ ಸಿಗೋ ಅಮೃತ....... ಎಲೆಯುದಿರಿಸಿದ್ದ ಮರಗಳು ನಿಧಾನವಾಗಿ ಚಿಗುರೊಡೆಯುತ್ತವೆ.... ಮರುಭೂಮಿಯಂತಿದ್ದ ಗುಡ್ಡಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತವೆ....ಬಣ್ಣ ಬಣ್ಣದ.... ವಿವಿಧ ಗಾತ್ರದ.... ವಿವಿಧ styleನ ಕೊಡೆಗಳು ರಾರಾಜಿಸಲು ಶುರುವಾಗುತ್ತವೆ ......



ಅಷ್ಟೊಂದು ದಿನ ಎಲ್ಲಿದ್ದವೋ ಈ ಕಪ್ಪೆಗಳು.... ನಿಧಾನವಾಗಿ ಟ್ರ್ರೋಂ...... ಟ್ರ್ರೋಂ...... ಅಂತ ಕೂಗಾಡ್ತಾ ಕಛೇರಿ startಮಾಡಿಯೇ ಬಿಡ್ತವೆ.... ಈ ಪಾಪಿ Universityಯವರು ನಮ್ಮಂತಹಾ engineering studentsಗಳಿಗೆ ಈ ಸಮಯದಲ್ಲೇ ರಜಾ ಕೊಡೋದು..... ಒಳಗಡೆ ಕೂರಕ್ಕೂ ಅಲ್ಲ.... ಹೊರಗಡೆ ಇಳಿಯಕ್ಕೂ ಅಲ್ಲ ಅನ್ನೋ ನಮ್ ಅವಸ್ಥೆ ಅವ್ರಿಗೇನಕ್ಕೆ ಅರ್ಥ ಆಗಲ್ಲ....????



ನಂಗಂತೂ ಈ ಮಳೆ ಅಂದ್ರೆ ಒಂಥರಾ ಇಷ್ಟ....... ರಜಾ ಇದ್ರೆ ಇನ್ನೂ ಮಜಾ..... ಗುರ್ರ್ರ್ ಅಂತ ಗೊರಕೆ ಹೊಡೀತ್ತಾ ಅಮ್ಮನ ಬೈಗುಳು ಕೇಳೋ ತನಕ ನಿದ್ದೆ.... ಆಮೇಲೆ ಹಬೆಯಾಡೋ strong cofee.... ಅಬ್ಬಾ.... ಸಂಜೆ ಧೋ... ಅಂತ ಹೊರಗಡೆ ಸುರೀತ್ತಿರೋ ಮಳೆ ಜೊತೆ ಬಿಸಿ ಬಿಸಿ ಎಣ್ಣೆ ತಿಂಡಿ.... ಹಪ್ಪಳಾನೋ ಬೇಸಿಗೆಯಲ್ಲಿ ಹಂಡೆಯಲ್ಲಿ ಹಾಕಿರೋ ಹಲಸಿನ ಸೋಳೆಯ "ಉಂಡಳಿಕಾ"ನೋ ಸಿಕ್ ಬಿಟ್ರೆ ಅಂತೂ ಭೂಮಿ ಮೇಲೆ ಇರೋ ಸ್ವರ್ಗದ ಥರಾನೇ.....





ಮೊನ್ನೆ ಒಂದು ದಿನಾ ನನ್ ದಿನಚರಿಗೆ ವ್ಯತಿರಿಕ್ತವಾಗಿ ಬೆಳ್ಳಂಬೆಳಗ್ಗೇನೇ ಎದ್ದು ದೂರದಲ್ಲಿರೋ ಒಬ್ಬ friend ಮನೆಗೆ ಹೊರಟಿದ್ದೆ... ನಮ್ಮೂರ ರೋಡ್ ಗಳ ಬಗ್ಗೆ ಹೇಳೋದೇ ಬೇಡಪ್ಪಾ.... ಸಾಕ್ಷಾತ್ ಸರ್ಕಸ್ ನವರ ಮರಣ ಗುಂಡಿಗಳ ಥರಾನೇ ಇರ್ತವೆ....Bus standಗೆ ನಡೀತ್ತಾ ಹೋಗ್ತಿದ್ದೆ.... ಎಲ್ಲಿಂದಲೋ ಭರ್ ಅಂತ ಒಂದು ಕೆoಪಿನ ಕಾರಲ್ಲಿ ಬಂದ ಫಟಿಂಗ ನನ್ cream colourಗೆ ಪಿಚಕ್ ಅಂತ ಕೆಸರೆರಚಿಯೇ ಬಿಟ್ಟ.... ಮೊನ್ನೆ ಮೊನ್ನೆ ಹೊಸದಾಗಿ ಹೊಲಿಸಿದ್ದ shirt ಬೇರೆ....5-10 ಸಾರಿ ಮಂಗನ ಮದುವೆಯಂತಿದ್ದ ಬಿಸಿಲಲ್ಲಿ ಕಷ್ಟಾ ಪಟ್ಟು ಒಣಗಿಸಿದ್ದೆ..... ದುರವಸ್ಥೆ ನೋಡಿ ನಖಶಿಖಾಂತ ಉರಿದೋಯ್ತು.... ಕಾರಿಗೆ ಕಲ್ಲು ಹೊಡಿಯೋಣ ಅಂತ ಅನಿಸ್ತು.... ಅವ್ನು ಹೋದ ಸ್ ನಲ್ಲಿ ಕಾರು ಪಕ್ಕದ ತಿರುವಲ್ಲಿ ಮರೆಯಾಗಿ ಹೋಗಿಯೇ ಬಿಡ್ತು...........



ಒಂದು ಮಳೆ ಬಿತ್ತಂದ್ರೆ ಸಾಕು.... ಶುರುವಾಯ್ತು ಸೊಳ್ಳೆಗಳ ಕಾಟ.... ಟುಯ್.... ಅಂತ ಬರ್ತಾವೆ "ಡ್ರ್ಯಾಕುಲಾ"ಗಳು... ಅವು free ಆಗಿ ವರ್ಷಕ್ಕೊಂದು introduce ಮಾಡೋ ಜ್ವರಾ ಬೇರೆ..... ಡೆಂಗ್ಯೂ ಅಂತೆ.... ಚಿಕನ್ ಅಂತೆ..... ಟೊಮೇಟೋ ಅಂತೆ..... ಬಟಾಟೆ ಅಂತೆ.... ಕೇಳಿದ್ರೇನೇ ಸಾಕಪ್ಪಾ.... ಬೆಂಗಳೂರಿನ K.R. ಮಾರುಕಟ್ಟೆಯಲ್ಲಿ 4ರೂಗೆ 2ಅಂತ sale ಮಾಡೋ ಹಾಗಲ್ಕಾಯಿ ಥರಾ ಆಗುತ್ತೆ ನಂ ಮುಖ....



ಆದ್ರೆ last yearನ ಒಂದು ಮೊದಲ ಮಳೆ ನನ್ನ ಮನಸ್ಸಲ್ಲಿ ಇನ್ನೂ ಹಾಗೇ ಇದೆ. ಜಾಲಳ್ಳಿ ಸಮೀಪದ industrial areaದ ಒಂದು companyಗೆ calibrationಗೆ ಅಂತ ಹೋಗಿದ್ದೆ... ಅಲ್ಲಿಂದ ಹೊರಟು ಹೊರಗಡೆ ಬಂದು ನೋಡ್ತೇನೆ... ಸೂರ್ಯ ಮಂಗಮಾಯ..... ಬಂದೇಬಿಡ್ತು ನೋಡಿ..... ಮಳೆ... ಟಪ್ ಟಪ್ ಅಂತ 10...15 ಹನಿ ನನ್ ಬಿಳಿ shirt ಮೇಲೆ ಬಿದ್ದಿರ್ಬಹುದೇನೋ.... ಮನೆಗೆ ಬಂದು shirt ಕಳಚಿ ನೋಡ್ತೇನೆ... ಆ ಹನಿಗಳ ಕಂದು ಕಲೆ ಹಾಗೇ ಇತ್ತು.... ಆದ್ರೆ ಆ industrial areaದಲ್ಲಿ ಎಷ್ಟು pollution ಇರ್ಬೇಡ????? ನಮ್ಮೂರೇ so far better ಕಣ್ರೀ.... ನದೀ ತೋಡಿನ ಕಡೆಗೆ ಹೋದ್ರೆ.... ತೆಂಗಿನ ಕಾಯಿ... ಅಡಿಕೆ.... ಏಡಿ... ಎಲ್ಲಾನೂ ಸಿಗಬಹುದು....chance ಇದ್ರೆ......




ಚಿಕ್ಕಂದಿನಲ್ಲಿ ಶಾಲೆಗೆ ಹೋಗ್ತಾ ಇನ್ನೂ ಮಜಾ ಇತ್ತು.... ಇರೋ ಬರೋ ತೋಡಲ್ಲೆಲ್ಲಾ ಇಳೀತ್ತಾ..... ಚಳುಂ.. ಪುಳುಂ ಅನ್ನುತ್ತಾ... ಗುಡ್ಡೆಯಲ್ಲಿರೋ ನೀಲಿ ಬಣ್ಣದ ಕುಂಟಲು ಹಣ್ಣು ತಿನ್ನುತ್ತಾ.... ಬಾಯಿ ಎಲ್ಲಾ ನೀಲಿ ನೀಲಿ ಮಡಿಕ್ಕೊಳ್ಳುತ್ತಾ.... ಶಾಲೆಯಿಂದ ಮನೆಗೆ ಬರಬೇಕಿದ್ರೆ ತುಂಬಾ ಹೊತ್ತಾಗ್ತಿತ್ತು..... Full ಒದ್ದೆ ಬೇರೆ...... ಒಂದು ಸಾರಿ ಗದ್ದೆಯಲ್ಲಿ ತುಂಬಿರೋ ನೀರಲ್ಲಿ ಕಾಲು ಮುಳುಗಿಸಲು ಹೋಗಿ ಜಾರಿ ಕೆಸರಿಗೆ ಬಿದ್ದಿದ್ದೆ.......!!!!!!! ಚಿಕ್ಕಂದಿನಲ್ಲೇ ಬೆಳೆಸ್ಕೊಂಡ ಕೊಡೆ ಕಳ್ಕೊಳ್ಳೋ ಅಭ್ಯಾಸ ಈವಾಗ Hobby ಆಗಿ ಹೋಗಿದೆ...........!!!!!




ಎಲ್ಲಾದ್ರೂ ಹೋದಾಗ ಅಲ್ಲಿ ಮಳೆ ಬಂದ್ರೆ ನಾನು ಹೇಳೋದಿದೆ.... ನಾನು ಎಂಥಾ Great person!!! ನಾನು ಬಂದಾಗ ಮಳೆ ಕೂಡಾ ಬರುತ್ತೆ ಅಂತ... ಅದಕ್ಕೆ ಒಂದು ಸಾರಿ ನಾನು friend ಕೈಯಿಂದ ಬೈಸಿಕ್ಕೊಂಡಿದ್ದೆ.... "ಪಾಪಿ ಹೋದಲ್ಲಿ ಮೊಳಕಾಲು ನೀರು" ಅಂತ.......



hmmmmm......ಮತ್ತೆ ರಜಾ ಮುಗ್ದಿದೆ.... ಆಗಿದೆ.... 2ತಿಂಗಳು ರಜೆ ಮುಗಿಸಿ ಶಾಲೆಗೆ ಹೋಗ್ತಿರೋ 2nd standardಮಗೂ ಥರಾ ಆಗ್ತಿದೆ ನಂಗೆ.... ಇದ್ರ ಜೊತೆ ಬೇಸಿಗೇಲಿ ಆಗಿರೋ examನ ಬಿಸಿ ಬಿಸಿ resultಬೇರೆ.... ಧಾರೆಯಾಗಿ ಧರೆಗೆ ಸುರಿಯುತ್ತಿರೋ ಮಳೆಗೆ coolಆಗಿ ಪಾಠ ಕೇಳೋದಾ.... ಅಲ್ಲ ಬೆಚ್ಚಗೆ ನಿದ್ರೆ ಮಾಡೋದಾ?????? Confusion!!!!... hmmm...... ನೋಡ್ಬೇಕು.......

Wednesday, 28 July 2010

ಟಿಲ್ಲರ್ ಯೋಗಿ....

ಕೃಷಿ ನಮ್ಮ ಪಾರಂಪರಿಕ ಕಸುಬು..... ಯವುದೇ ಕೆಲಸ ಮಾಡಲಿ... ಯಾವನೇ ಇರಲಿ.. ಅವನಿಗೆ ಹೊಟ್ಟೆಗೆ ಹಿಟ್ಟು ಬೇಕೇ ಬೇಕು... ಎಷ್ಟೇ ತಂತ್ರಜ್ನಾನ ಮುಂದುವರಿದಿದ್ದರೂ... ಇದನ್ನ ಯಾವುದೇ ಕಾರ್ಖಾನೆಯಲ್ಲೂ ತಯಾರಿಸಲು ಸಾಧ್ಯವಿಲ್ಲ... ಅನ್ನ ನೀಡೋನೇ ಕೃಷಿಕ...



















ಇವನನ್ನ.. ನೇಗಿಲ ಯೋಗಿ ಅಂತಿದ್ರು... ಆದ್ರೆ ಕಾಲ ಬದಲಾಗಿದೆ... ಜನ ಬದಲಾಗಿದ್ದರೆ... ಕೃಷಿಕ ಟಿಲ್ಲರ್ ಯೋಗಿ ಯಾಗಿದ್ದಾನೆ...





ಮೊನ್ನೆ ಒಬ್ರು relEtive ಮನೆಗೆ ಹೋಗಿದ್ದೆ.... ಪಕ್ಕಾ local place ...acareಗಟ್ಟಲೆ ಗದ್ದೆ...

ಚಿಕ್ಕಂದಿನಲ್ಲಿ ಟಿಲ್ಲರ್ ನೋಡೋದಂದ್ರೆ ನಮಿಗೆಲ್ಲಾ ಹಬ್ಬ ಆಗಿತ್ತು... ಸಂಜೆ ಶಾಲೆ ಬಿಟ್ಟು ಟಿಲ್ಲರ್ ಹಿಂಬಾಲಿಸಿ ಬೈಗಳು ತಿಂದಿದ್ದಕ್ಕಂತೂ ಲೆಕ್ಕಾನೇ ಇಲ್ಲ.... ಅದನ್ನ ಬಿಡೋನು ದೊಡ್ಡ ಹೀರೋ ಆಗಿದ್ದ.... ಅಷ್ಟೊಂದರ ಮಟ್ಟಿಗೆ ನಮಿಗೆಲ್ಲರಿಗೂ ಇಷ್ಟ ಆಗಿತ್ತು ಅದು.....

ಅದೇ ನೆನಪಲ್ಲಿ ಗದ್ದೇಲಿ ಉಳುತ್ತಿದ್ದ ಅಣ್ಣನನ್ನ ನೋಡೊಕ್ಕೆ ಹೋದೆ... ತುಬಾ ಸಮಯ ಆಗಿತ್ತು ಇಂಥಾ ದೃಶ್ಯ ನೊಡದೆ.... ಚಿಕ್ಕಂದಿನಲ್ಲಿ ನಾವು ಹೇಳುತ್ತಿದ್ದಂತೆ ಅಸೂಯೇನೂ ಆಯಿತು.... ಕೆಸರಲ್ಲಿ ಆಡುತ್ತಾ ಗಾಡಿ ಓಡಿಸುತ್ತಾ ಎಷ್ಟೊಂದು ಮಜಾ ಮಾಡ್ತಿದ್ದಾನೆ ಅಂತ....




ಆದ್ರೆ ಇಂತಹಾ ದೃಶ್ಯಗಳು ಕಡಿಮೆಆಗ್ತಾ ಇವೆ... ಎಲ್ಲರೂ ಹೊರಗಡೆ ಹೋಗೋರೇ ಆಯ್ತು... ಅಬ್ಬಾ... ತೆಂಗಿನ ಕಾಯಿ ಕೊಯ್ಯೋಕ್ಕಂತೂ ಜನಾನೇ ಸಿಗಲ್ಲ... ನಾನಂತೂ ಇಂಜಿನಿಯರ್ ಆದ ಮೇಲೆ ಇದಕ್ಕೂ ರೋಬೋಟ್ ಕಂಡು ಹಿಡಿಬೇಕು ಅಂತಿದ್ದೇನೆ.... ಇರೋ ಗದ್ದೇನ ಸುಮ್ಮನೆ ಬಿಡೋರೇ ಜಾಸ್ತಿ.. ಕೇಳಿದ್ರೆ "ಅಸಲಾಪುಜ್ಜಿ ಅಣ್ಣೇರೆ " ಅಂತಾರೆ... ಬೆಲೆ ಅಂತೂ ಹಿಮಾಲಯದಂತೆ ಏರುತ್ತಾ ಇದೆ.. superb graph!!!!


/>


ಏನಂದ್ರೂ ಎಲ್ಲಾನೂ out of control... 10...20 ವರ್ಷ ಕಳೆದ ಮೇಲೆ ಏನು ತಿನ್ಬೇಕಾಗುತ್ತೋ.......!!!!


ದೇಶದ ಬೆನ್ನೆಲುಬಾದ ಕೃಷಿಕನ ಬೆನ್ನೆಲುಬು ಮಾತ್ರ ಉಳಿದಿದೆ...

ತೋಡಲ್ಲ... ರೋಡು....

ನಾನು ಹೇಳ್ಬೇಕಾಗಿಲ್ಲ... ಹಾದು ಹೋದ ವಾಹನಗಳ ಚಕ್ರದ ಗುರುತು ನೋಡಿದಾಗಲೇ ನಿಮಿಗೆ ಗೊತ್ತಾಗುತ್ತೆ...



ಇದು ನಮ್ಮ ಹೆಮ್ಮೆಯ ಭಾರತದ ರಸ್ತೆಗಳ ಅವಸ್ತೆ... ಮಳೆಗಾಲದಲ್ಲಂತೂ ಮಳೆ ಕೊಯಿಲು ಮಾಡಲೋ ಎಂಬಂತೆ ಈ ಸರಕಾರದ ಇಂಗು ಗುಂಡಿ ವ್ಯವಸ್ಥೆ... ಅದೂ ಸಾವಿರಾರು ವಾಹನಗಳು ಸಂಚರಿಸೋ National Highwayಗಳಲ್ಲಿ...

ತಗೊಂಡಿರೋ ದುಡ್ಡಿಗೆ ಸರಿಯಾಗಿ ಕೆಲಸ ಮಾಡಲಾಗದ ದೇಶದ್ರೋಹಿಗಳಿಗೇನೂ ಕಮ್ಮಿಯಿಲ್ಲ ನಮ್ಮಲ್ಲಿ..





ತಂತ್ರಜ್ನಾನಕ್ಕೇನು ಕೊರತೆ ನಮ್ಮಲ್ಲಿ.... ಗಗನ ಚುಂಬಿ ಕಟ್ಟಡಗಳನ್ನ ಕಟ್ತಾರೆ... ಆದ್ರೆ ಮೀಟರ್ ಉದ್ದದ ಸಂಕ ಉದ್ಘಾಟನೆಯ ಮುಂಚಿನ ದಿನಾನೇ ಮುರಿದು ಬೀಳುತ್ತೆ... ಹೇಳೋರು ಕೇಳೋರು ಇದಕ್ಕೆ ಬೆಂಬಲವಾಗಿರ್ತಾರೆ.. ಪತ್ರಿಕೆಗಳು... ದೂರದರ್ಶನ ಚಾನೆಲ್ ಗಳು ಒಂದೆರಡು ದಿನ ಸುದ್ದಿ ಮಾಡಿ ಸುಮ್ನಾಗ್ತಾವೆ.. ಇತ್ತ.. ಕಳಪೆ ಕಾಮಗಾರಿ ಮಾಡಿ/ಮಾಡಿಸಿರೋನು ಆರಾಮವಾಗಿ ದೊಡ್ಡ ಬಂಗ್ಲೆ ಕಟ್ಟುತ್ತಾ ಇರ್ತಾನೆ...



ಬೇಲೀನೆ ಎದ್ದು ಹೊಲ ಮೆಯಿದರೆ??? ಹೇಳೋರಿಲ್ಲ... ಕೇಳೋರಿಲ್ಲ... ಹೆಮ್ಮೆಯಗ್ತಿದೆ ಅಲ್ವ???!!!

’ಕರ’ವೀರ!



ನನ್ನೊಬ್ಬ ಗೆಳೆಯ ಇದ್ದಾನೆ... ತುಂಬಾ ಶೂರ... ಸಾಹಸ ಸಿಂಹ... ಅವನ ಕೈಗೆ ಕರವೀರ ಸಿಕ್ಕಿದ್ದು ಹೀಗೆ........

ಅನಾಮಧೇಯ....



ಇದರ ಹೆಸರೇನು ಅಂತ ನಂಗೆ ಗೊತ್ತಿಲ್ಲ... ಸೊಪ್ಪು ಕಡೀತ್ತಾ ಸಿಕ್ತು... ಏನೊಂದು ಧೈರ್ಯ ಇದಿಕ್ಕೆ ಗೊತ್ತಾ...2..3 ಹೆಜ್ಜೇನಿನ ನೊಣಗಳಿದ್ರೂ ಆರಾಮಾಗೆ cool ಆಗಿ ಮುಂಗಾರು ಮಳೆನ enjoy ಮಾಡ್ತಾ ಇತ್ತು...

ಛೀ... ಕಳ್ಳಿ....!!!!



hmmmm ಈ ಕಳ್ಳಿ ಮೈ ತುಂಬಾ ಮುಳ್ಳಿದ್ರೂ ತುಂಬಾ ಸುಂದ್ರಿ......



ಕಯೋದೇ ಕೆಲಸ ಇವಳಿಗೆ... ಕೆಲವೆಡೆ ಹೊಲ ಕಾಯುತ್ತಾಳೆ.. ಇನ್ನು ಕೆಲವೆಡೆ... ಬೆದುರು ಗೊಂಬೆ ಜೊತೆ ಹಗಲಿರುಳೂ ವಿವಿಧ ಭಂಗಿಗಳಲ್ಲಿ pose ಕೊಡ್ತಾ ಇರ್ತಾಳೆ.... ಯಾರ ತಂಟೆಗೂ ಹೋಗಲ್ಲ... ಸುದ್ದಿಗೆ ಬಂದ್ರೆ ಮಾತ್ರ ಸುಮ್ನೆ ಬಿಡಲ್ಲ... ಸ್ನೇಹಕ್ಕೂ ಬಧ್ಧ... ಸಮರಕ್ಕೂ ಸಿಧ್ಧ .... ha ha....

Genese

ಪತ್ರೊಡೆ ನಮ್ಮೂರಲ್ಲಿ ತುಂಬಾ famous .... ಆ ಟೇಸ್ಟ್ ಅಂತೂ superb.....





ಅಂದ್ಕೊಂಡಾಗ್ಲೇ ಬಾಯಲ್ಲಿ ನೀರೂರುತ್ತೆ.... ಅಬ್ಬಾ... ಪಲ್ಯ ಹಾಗೂ ಮಜ್ಜಿಗೆ ಹುಳಿ ಟೇಸ್ಟ್ ಅಂತೂ ಹೇಳೋದೇ ಬೇಡ.. ರಜಾ ಬೇರೆ.... ಫುಲ್ ಬೋರ್ ಹೊಡೀತ್ತಾ ಇತ್ತು ... ನಮ್ಮೂರ ಮಳೆ ಅಂದ್ರೆ ಹೆಳೋದೇ ಬೇಡ... ಅಬ್ಬಾ.. ಒಂದೊಂದು ಸಾರಿ ಆಕಾಶಕ್ಕೆ ತೂತಾಗಿಬಿಟ್ಟಿತೇನೋ ಅನಿಸಿಬಿಡೋ ಥರ ಸುರಿಯುತ್ತೆ... ಪತ್ರೋಡೆ ತಿನ್ನೊಣ ಅನಿಸ್ತು.... ಅಮ್ಮನಲ್ಲಿ ಹೇಳಿದಾಗ ಎಲೆ ತಗೊಂಡ್ ಬಾ ಅಂತ ಅಪ್ಪಣೆ ಆಯಿತು... hmmm.. ಅಂತೂ ಹೊರಟೇ ಬಿಟ್ಟೆ.. ಆವಾಗಷ್ಟೆ ಮಳೆ ನಿಂತಿತ್ತು...




ಪತ್ರೊಡೆ ಎಲೆಗಳು... ಅದರ ಮೇಲೆ... ಮುತ್ತಿನಂಥ ನೀರ ಹನಿಗಳು... ಮೋಡದೆಡೆಯಿಂದ ಸೂರ್ಯ ಇಣುಕಿದ್ದ ... ಅವನ ಪ್ರಖರ ಕಿರಣಗಳು ಆ ಎಲೆಗಳ ಮೇಲೆ ಬಿದ್ದು ನೀರು ಮುತ್ತಿನಂತೆ ಹೊಳೀತಿತ್ತು...




ಎಲೆ ಹರಿದರೇನು... ನೋಡಕ್ಕೆ ಚೆನ್ನಗಿದೆಯಲ್ಲ.........




ಅಯ್ಯೊ... ಸಾಕು....ಪತ್ರೊಡೆ readyಆಗಿದೆ.... ತಿನ್ಬೇಕು...

Tuesday, 27 July 2010


ಪ್ರಕೃತಿ ಸೌಂದರ್ಯದ ಗಣಿ .. .. ಅದು ಅಸ್ವಾದಕನಿಗೆ ಮಾತ್ರ ಕಾಣಿಸುತ್ತೆ .... ಹೂವು ಅಂದ್ರೆ ಯಾರಿಗೆ ಇಷ್ಟವಿಲ್ಲ???? ಆದ್ರೆ ಗುಲಾಬಿ ಇರೋದು ಮುಳ್ಳಿನ ಎಡೆಯಲ್ಲಿ ಅನ್ನೋದು Fact.... ಇದೇ ನಮ್ಮ ಜೀವನ... ಒಮ್ಮೊಮ್ಮೆ ಹೂವಂತೆ ಸುಂದರವಾಗಿ... ಸುಕೊಮಲವಾಗಿ ಇರುತ್ತೆ... ಆದ್ರೆ ಜೊತೇಲಿ ಮುಳ್ಳು ಇದ್ದೇ ಇರುತ್ತೆ..
ಈ ಗುಲಾಬೀನ ನೋಡಿ... ಪ್ರಕೃತಿ ಎಷ್ಟೊಂದು ಅದ್ಭುತ!!! ಈ ಹೂವು compleat ಆಗಿ ಅರಲಿಲ್ಲ... but... still try ಮಾಡ್ತಾ ಇದೆ.. ಮೊಳಕೆ ಒಡೆಯೋ ಬೀಜ... ಅದ್ರ ಕವಚ ಎಷ್ಟೊಂದು ಬಲವಾಗಿದ್ರೂ ಸ್ಪೋಟ ಆಗಲ್ವಾ???? ಪ್ರಕೃತಿ ಅಂದ್ರೆ ಹೀಗೇನೆ..... ಅದ್ಭುತ...ರಮಣೀಯ...ಹಾಗೇನೇ ನಿಘೂಡ.........
--

ಬೆಳಕು


ಬೆಳಕು ನಮ್ಮ ಜೀವನದ ಅವಿಭಾಜ್ಯ ಅಂಗ... ನಮ್ಮಲ್ಲಿ ಬೆಳಕು ಅಂದ್ರೆ ಜ್ಞಾನ ಅಂತ.. ಅಮೇರಿಕಾ ದಲ್ಲಿ ಕರೆಂಟ್ ಹೋದ್ರೆ ಕರೆಂಟ್ ಆಫೀಸಿಗೆ ಫೋನ್ ಮಾಡ್ತಾರೆ... ಚೀನಾದಲ್ಲಿ fuse ನೋಡ್ತಾರೆ... ನಮ್ಮಲ್ಲೊ??? ಪಕ್ಕದ್ ಮನೆ ನೋಡ್ತೀವಿ.... true... but fact....!!!
ತುಂಬಾ power waste ಮಾಡ್ತೀವಲ್ಲಾ... ಅದೇ ಒಂದು ಕಾರಣ...power cutಗೆ.. ವಿದ್ಯುತ್ ಇಲಾಖೆಯವರೇನೂ ಕಮ್ಮಿ ಇಲ್ಲ... ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡ್ತಾರೆ. ... ಹೀಗೆ ಒಂದು power cut ಇದ್ದಾಗ ತೆಗೆದಿರೋದು ಈ photo..